Welcome to Shri Jnanashakthi Subrahmanyaswami Temple

ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಸಮೀಪದ ಪಾವಂಜೆ ಕ್ಷೇತ್ರದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವಿದೆ. ಪ್ರಾಚೀನ ಕಾಲದಿಂದಲೂ "ನಾಗವೃಜ ಕ್ಷೇತ್ರ"ವೆಂದೇ ಪ್ರಸಿದ್ಧಿ ಪಡೆದ ಈ ಪ್ರದೇಶದಲ್ಲಿ ಪಾವಂಜೆ ಕೋಡಿಮನೆ ವಾಸುಭಟ್ಟರು 1920ರಲ್ಲಿ ತಮ್ಮ ಮೂಲನಾಗ ಸನ್ನಿಧಿಯಲ್ಲಿ ಈ ದೇವಾಲಯವನ್ನು ಕಟ್ಟಿಸಿ ನಿರಂತರ ಆರಾಧಿಸುತ್ತಾ ತಮ್ಮ ಬದುಕಿನಲ್ಲಿ ಧನ್ಯತೆ ಕಂಡುಕೊಂಡರು.
ಈ ದೇವಾಲಯವು ಸಂಪೂರ್ಣ ಶಿಲಾಮಯಗೊಂಡು ಶ್ರೀಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ತಾ.09.06.2005ರಂದು ತಂತ್ರೋಕ್ತವಾಗಿ ಪಾಂಚರಾತ್ರಾಗಮದ ಶಿವಾಯತನದಲ್ಲಿ ಶಿವಾಂಶ ರೂಪದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿಯ ಪ್ರತಿಷ್ಠೆಯು ನೆರವೇರಿ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು.