“ಶ್ರೀ ಸವನ – ಗೋವರ್ಧನ” 01-11-2018


“ಶ್ರೀ ಸವನ – ಗೋವರ್ಧನ”
ಪಾವಂಜೆ ಸತ್ಯಕಥಾಮೃತ ಯಕ್ಷಸಮಾರಾಧನೆ
 
ಕಥಾ ಸಂವಿಧಾನ : ವೇದ ಕೃಷಿಕ ಕೆ.ಎಸ್.ನಿತ್ಯಾನಂದ ಸ್ವಾಮೀಜಿ.
ಪ್ರಸಂಗ ರಚನೆ: ಶ್ರೀ ಗಣೇಶ ಕೊಲೆಕಾಡಿ
 
 
[ಶ್ರೀ ಎಂದರೆ ಸಂಪತ್ತು. ಸಂಪತ್ತು ಎಂದರೆ ಗೋವು. ಸವನ ಎಂದರೆ ಯಜ್ಞ ಗೋವಿಗೆ ಸಂಬಂಧ ಪಟ್ಟ ಯಜ್ಞ.
ಗೋವರ್ಧನ ಎಂಬುವುದು ಕೇವಲ ಗೋವರ್ಧನ ಗಿರಿಗೆ ಸೀಮಿತವಾಗದೆ ಗೋವೆಂದರೆ ಭೂಮಿಯೆಂದೂ ವೇದ ಎಂಬ ಅರ್ಥಗಳೂ ಇರುವುದರಿಂದ ಅವುಗಳ ವರ್ಧನೆ ಎಂಬ ಅರ್ಥವು ವಿಸ್ಫುರಿಸುತ್ತದೆ. ವೇದಾರ್ಥ ಪ್ರತೀಕವಾದ ಗೋಪವನ ಯಜ್ಞ ಆ ಮೂಲಕ ಲೋಕ ರಕ್ಷಣೆ , ವೇದ ಪ್ರಣೀತ ಸಾತ್ತ್ವಿಕ ಸಂಘಟನೆ ಆ ಮೂಲಕ ಶಕ್ತಿ ಅದರಿಂದ ಲೋಕೋದ್ಧಾರ ಮುಂತಾದ ಆಶಯಗಳನ್ನು ಈ ಕಥಾನಕ ಹೊಂದಿರುವುದರಿಂದ ಈ ಪ್ರಸಂಗಕ್ಕೆ ” ಶ್ರೀ ಸವನ ಗೋವರ್ಧನ ” ಎಂದು ಹೆಸರಿಡಲಾಗಿದೆ ]