24.06.2018 “ಧನ್ಯೋತ್ಸವ” ಹಾಗೂ “ಸ್ರಗಾಲ ಪೂಜೆ ಕಾರ್ಯಕ್ರಮ”


ದಿನಾಂಕ 10.04.2018 ರಿಂದ 19.04.2018 ರವರೆಗೆ ಭಾರತದ ಅಭ್ಯುದಯ ಹಾಗೂ ಲೋಕ ಹಿತದ ಸದುದ್ದೇಶದಿಂದ ಪಾವಂಜೆಯ ಶಾರಧ್ವತ ಯಜ್ಞಾಂಗಣದಲ್ಲಿ ನಡೆದ “ವಿಶ್ವ ಜಿಗೀಷದ್ ಯಾಗ” ಹಾಗೂ ಶ್ರೀದೇವರ “ಬ್ರಹ್ಮಕಲಶೋತ್ಸವ”“ಧನ್ಯೋತ್ಸವ” ಹಾಗೂ “ಸ್ರಗಾಲ ಪೂಜೆ ಕಾರ್ಯಕ್ರಮ”ಸಂಪನ್ನಗೊಂಡಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯ

10 ದಿನಗಳ ಧಾರ್ಮಿಕ, ಸಾಂಸ್ಕೃತಿಕ, ತ್ರಿಕಾಲ ಯಾಗ, ನಿರಂತರ ಅನ್ನಪ್ರಸಾದ, ಚಿಂತನ-ಮಂಥನ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿದ್ದು ಸಾವಿರಾರು ಭಗವದ್ಭಕ್ತರು ಭಾಗವಹಿಸಿ ಕೃತಾರ್ಥರಾಗಿದ್ದಾರೆ.
ನಿರಂತರವಾಗಿ ಜರಗಿದ ಈ ಪುಣ್ಯ ಕಾರ್ಯಕ್ರಮಕ್ಕೆ ಸಹಕರಿಸಿದ ಸ್ವಯಂಸೇವಕರಿಗೆ ಕೃತಜ್ಞತೆಯನ್ನು ಸಮರ್ಪಿಸುವ “ಧನ್ಯೋತ್ಸವ” ಹಾಗೂ “ಸ್ರಗಾಲ ಪೂಜೆ ಕಾರ್ಯಕ್ರಮ” ವು ದಿನಾಂಕ 24.06.2018 ಭಾನುವಾರ ಬೆಳಿಗ್ಗೆ 8.30 ರಿಂದ ಶಾರಧ್ವತ ಯಜ್ಞಾಂಗಣದಲ್ಲಿ ಜರಗಲಿದೆ.
ತಾವೆಲ್ಲರೂ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ…