ತುಳುನಾಡ ಕೃಷಿ ಜನಪದೋತ್ಸವ


ಕೃಷಿ ಪ್ರಧಾನವಾದ ದೇಶ ಭಾರತ. ಕೃಷಿಯಲ್ಲೇ ಜನರ ಉಸಿರಿದೆ, ಹೆಸರಿದೆ. ಕೃಷಿ ಎಂದರೆ ಮನುಷ್ಯ ಮತ್ತು ಪೃಕೃತಿಯ ನಡುವಿನ ಬಾಂಧವ್ಯ. ಇದು ಪೃಕೃತಿಯ ಆರಾಧನೆಯೂ ಹೌದು.ಕೃಷಿಯಿಂದ ಹಸನಾಗಿ ಭೂಮಾತೆ ಅನ್ನಪೂರ್ಣೆಯಾಗಿ ನಮ್ಮನ್ನು ಹರಸುತ್ತಾಳೆ.
 
ಸಂಸ್ಕೃತಿಯ ಪ್ರಾಣವಾದ ಹಳ್ಳಿಗಳ ಮೂಲ ಉದ್ದೇಶಗಳನ್ನು ಉಳಿಸೋಣ, ಮೆರೆಸೋಣ.
ಮೃಣ್ಮಯತೆಯಿಂದ ಚಿನ್ಮಯತೆಯನ್ನು ಪಡೆಯಲು ಈ ಕಾರ್ಯಕ್ರಮದ ಮೂಲಕ ನಾಂದಿ ಹಾಡೋಣ.
 
ಕೇಸರುಗದ್ದೆಯ ಬಯಲು, ಅಲ್ಲೇ ನಡೆಯುವ ನಮ್ಮ ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲು ನಿಮ್ಮಾಗಮನವೇ ನಮಗೆ ಆನಂದದ ಹೊನಲು.
ನೀವೆಲ್ಲರೂ ಬನ್ನಿ, ಪಾಲ್ಗೊಳ್ಳಿ.