ಅಗೇಲು ಸೇವೆ 26.04.2018


ಈ ವಿಶಿಷ್ಟ ಅಗೇಲು ಸೇವೆಯೆಂಬ ತಂತ್ರೋಕ್ತ ಪೂಜಾ ವಿಧಿಯು ಪಾವಂಜೆಯ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ೨೦೧೮ರ ಏಪ್ರಿಲ್ ೨೬ ರಂದು ೩-೮ ಗಂಟೆಯವರೆಗೆ ನಡೆಯಲಿದೆ. ಎಲ್ಲಾ ಭಕ್ತಾದಿಗಳಿಗೆ ಸೇವೆಗೆ ಅವಕಾಶವಿದೆ.

 

ಇಸ್ಲಾಮಿನ 786 ಎಂಬ ಸಂಖ್ಯೆಯು ಶೈವಾಗಮದ ಈ ಅಗೇಲು ಸೇವೆಯ  ಕೊಡುಗೆ. ಇದೇ ಅಗೇಲು ಸೇವೆಯು ಮೆಕ್ಕಾದಲ್ಲಿದ್ದ ಬೃಹತ್ ಶಿವಾಲಯದಲ್ಲೂ ಇದ್ದದ್ದು. ಇಸ್ಲಾಮ್ ಪೂರ್ವದಲ್ಲಿ  ಮರೂಭೂಮಿಯಲ್ಲಿ ಕುಟುಂಬ ನಿರ್ವಹಣೆಗೆ ಸಂಸ್ಕರಿತ ಆಹಾರವನ್ನು ನಿತ್ಯವೂ ಅಗೇಲು ಸೇವೆ ಮಾಡಿ ಪ್ರಸಾದ ರೂಪದಲ್ಲಿ ವಿತರಿಸುತ್ತಿದ್ದರು.

 

ಅದರ ಕೆಲ ಮುಖ್ಯ ಸೂತ್ರಗಳನ್ನು ಹೆಸರಿಸುತ್ತಾ ಅಗೇಲು ಸೇವೆಯ ವಿಧಿ ವಿಧಾನಗಳನ್ನು ಪ್ರಕಟಿಸುತ್ತಿದ್ದೇವೆ. ಆಸಕ್ತರು ತಮ್ಮ ಊರಿನಲ್ಲಿ ದೇವಾಲಯದಲ್ಲಿ ಈ ಸೇವೆಯ ಮುಖೇನ ಆಹಾರ ಸಂಸ್ಕರಣೆ ಪಡೆದು ಅನ್ನದಿಂದ ಲಭ್ಯವಾಗುವ ಜ್ಞಾನ ಪಡೆದು ಮುಮುಕ್ಷುಗಳಾಗಲಿ ಎಂದು ಹಾರೈಸುತ್ತೇವೆ.